ಜನಸದಪಂದನ ನ್ಯೂಸ್, ನೌಕರಿ : ಪಶ್ಚಿಮ ರೈಲ್ವೆಯ ನೇಮಕಾತಿ ಮಂಡಳಿಯು ಇದೀಗ 2024-25 ನೇ ಸಾಲಿಗೆ ಅಪ್ರೆಂಟಿಸ್ ತರಬೇತುದಾರರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಇದನ್ನು ಓದಿ : ತಂದೆ ಇಲ್ಲದ ಮಕ್ಕಳಿಗೆ ಸಿಗುತ್ತೆ 24 ಸಾವಿರ ರೂ. ಸ್ಕಾಲರ್‌ಶಿಪ್; ಮಾನದಂಡಗಳೇನು ಗೊತ್ತಾ.?
ನೇಮಕಾತಿ ಪ್ರಾಧಿಕಾರ | ಆರ್‌ಆರ್‌ಸಿ, ಪಶ್ಚಿಮ ರೈಲ್ವೆ. |
ಹುದ್ದೆ ಹೆಸರು | ಅಪ್ರೆಂಟಿಸ್ ತರಬೇತುದಾರರು. |
ಹುದ್ದೆಗಳ ಸಂಖ್ಯೆ | 3,624 |
ನೇಮಕಾತಿಯ ಪಟ್ಟಿ ಕೆಳಗಿನಂತಿದೆ :
- ಫಿಟ್ಟರ್
- ವೆಲ್ಡರ್
- ಕಾರ್ಪೆಂಟರ್
- ಪೇಂಟರ್
- ಡೀಸೆಲ್ ಮೆಕ್ಯಾನಿಕ್
- ಮೆಕ್ಯಾನಿಕ್ ಮೋಟಾರು ವೆಹಿಕಲ್
- ಇಲೆಕ್ಟ್ರೀಷಿಯನ್
- ಇಲೆಕ್ಟ್ರಾನಿಕ್ ಮೆಕ್ಯಾನಿಕ್
- ವೈಯರ್‌ಮನ್
- ರೆಫ್ರಿಜೆರೇಟರ್ ( ಎಸಿ-ಮೆಕ್ಯಾನಿಕ್)
- ಪೈಫ್ ಫಿಟ್ಟರ್
- ಪ್ಲಂಬರ್
- ಡ್ರಾಫ್ಟ್‌ಮನ್ (ಸಿವಿಲ್)
- PASSA
- ಸ್ಟೆನೋಗ್ರಾಫರ್
- ಮಷಿನಿಸ್ಟ್
- ಟರ್ನರ್
ಇದನ್ನು ಓದಿ : Health : ಏಳು ದಿನಗಳ ತನಕ ಎಳನೀರು ಸೇವಿಸಿದರೆ ಏನಾಗುತ್ತದೆ.?
ಅರ್ಜಿ ಶುಲ್ಕ : ಅರ್ಜಿ ಸಲ್ಲಿಸಲು ಶುಲ್ಕ ರೂ.100.
ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ.
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಿದ್ಯಾರ್ಹತೆ : ಐಟಿಐ ಪಾಸ್ ಮಾಡಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಟ್ರೇಡ್ ಸರ್ಟಿಫಿಕೇಟ್‌ಗಳನ್ನು ಹೊಂದಿರಬೇಕು.
ಆಯ್ಕೆವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಮೆಟ್ರಿಕ್ಯೂಲೇಷನ್‌ನ ಶೇಕಡ.50 ಅಂಕಗಳು ಮತ್ತು ಐಟಿಐ ಟ್ರೇಡ್‌ನ ಶೇಕಡ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.
ಮಾಸಿಕ ಸ್ಟೈಫಂಡ್ : ಪಶ್ಚಿಮ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಿ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್ ರೂ.8000- 9000 ವರೆಗೆ.
ಉದ್ಯೋಗ ವಿವರ :
ಹುದ್ದೆಯ ಹೆಸರು | ಅಪ್ರೆಂಟಿಸ್ ಹುದ್ದೆಗಳು |
ವಿವರ : | ಪಶ್ಚಿಮ ರೈಲ್ವೆ, ಮುಂಬೈ ಅಧಿಸೂಚನೆ. |
ಪ್ರಕಟಣೆ ದಿನಾಂಕ : | 2024-09-20 |
ಕೊನೆ ದಿನಾಂಕ : | 2024-10-22 |
ಉದ್ಯೋಗ ವಿಧ : | ಪೂರ್ಣಾವಧಿ |
ಉದ್ಯೋಗ ಕ್ಷೇತ್ರ : | ಕೇಂದ್ರ ಸರ್ಕಾರಿ ಉದ್ಯೋಗ |
ವೇತನ ವಿವರ : | INR 8000 to 9000 /Month |
ವಿದ್ಯಾರ್ಹತೆ : | ಮೆಟ್ರಿಕ್ಯೂಲೇಷನ್ ಜತೆಗೆ, ಐಟಿಐ ಪಾಸ್. |
ನೇಮಕಾತಿ ಸಂಸ್ಥೆ ಮತ್ತು ವೆಬ್‌ಸೈಟ್ :
ಸಂಸ್ಥೆಯ ಹೆಸರು | ರೈಲ್ವೆ ನೇಮಕಾತಿ ಮಂಡಳಿ, ಪಶ್ಚಿಮ ರೈಲ್ವೆ, ಮುಂಬೈ. |
ವೆಬ್‌ಸೈಟ್ ವಿಳಾಸ | https://www.rrc-wr.com/# |
ಇದನ್ನು ಓದಿ : Rain Alert : ಈ ಜಿಲ್ಲೆಗಳಲ್ಲಿ ಮತ್ತೆ ಅಬ್ಬರಿಸಲಿದೆ ಮಳೆ.!
ಉದ್ಯೋಗ ಸ್ಥಳ :
ವಿಳಾಸ | ಮುಂಬೈ |
ಸ್ಥಳ | ಮುಂಬೈ |
ಪ್ರದೇಶ | ಮಹಾರಾಷ್ಟ್ರ |
ಅಂಚೆ ಸಂಖ್ಯೆ | 400007 |
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ | 23-09-2024 |
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 22-10-2024 ರ ಸಂಜೆ 05 ಗಂಟೆವರೆಗೆ. |
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.