ಜನಸ್ಪಂದನ ನ್ಯೂಸ್, ಬೆಂಗಳೂರು : ನಮ್ಮ ಮೆಟ್ರೋ (Namma Metro) ದಲ್ಲಿ ಖಾಲಿ ಇರುವ 58 ಅಸಿಸ್ಟಂಟ್ ಸೆಕ್ಯೂರಿಟಿ ಆಫೀಸರ್ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (Bangalore Metro Rail Corporation Limited) ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ ಈ ಲೇಖನದಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ : Video : ಲಂಚದ ಹಣವನ್ನು ಹಂಚಿಕೊಳ್ಳುತ್ತಿದ್ದ ಮೂವರು ಪೊಲೀಸರು ಸಸ್ಪೆಂಡ್.!
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ ಮತ್ತು ಅರ್ಹತೆ :
ಜೂನಿಯರ್ ಕಮಿಷನ್ಡ್ ಶ್ರೇಣಿಯಲ್ಲಿ ಸೇವೆಯಲ್ಲಿರುವ ಅಥವಾ ನಿವೃತ್ತ ಸಿಬ್ಬಂದಿ, ಅಧಿಕಾರಿ/ಸುಬೇದಾರ್ ಮೇಜರ್/ಸುಬೇದಾರ್/ಮಾಸ್ಟರ್ ಚೀಫ್ ಪೆಟ್ಟಿ, ಆಫೀಸರ್/ಮಾಸ್ಟರ್ ವಾರಂಟ್ ಆಫೀಸರ್/ವಾರಂಟ್ ಆಫೀಸರ್ ಅಥವಾ ತತ್ಸಮಾನ, ರಕ್ಷಣಾ ಸೇವೆಯಲ್ಲಿ ಇದ್ದವರು, ಇನ್ಸ್‌ಪೆಕ್ಟರ್/ಸಬ್ ಇನ್ಸ್‌ಪೆಕ್ಟರ್/ಎಎಸ್ಐ ಅಥವಾ ತತ್ಸಮಾನ ಶ್ರೇಣಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಯೋಮಿತಿ :
ಗರಿಷ್ಠ ವಯೋಮಿತಿ 62 ವರ್ಷ. (ಗಮನಿಸಿ : ಇದು ಗುತ್ತಿಗೆ ಆಧಾರಿತ ಉದ್ಯೋಗವಾಗಿದ್ದು, 60 ವರ್ಷಕ್ಕಿಂತ ಕೆಳಗಿರುವವರನ್ನು 3 ವರ್ಷಕ್ಕೆ ಮತ್ತು 60 ವರ್ಷಕ್ಕಿಂತ ಮೇಲಿರುವವರನ್ನು 1 ವರ್ಷಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.)
ಇದನ್ನೂ ಓದಿ : ಜೆಸಿಬಿ ಬಳಸಿ ATM ದರೋಡೆ ಮಾಡಲೆತ್ನಿಸಿದ ಕಳ್ಳರು ; ವಿಡಿಯೋ Viral.!
ಆಯ್ಕೆ ವಿಧಾನ :
ದೈಹಿಕ ಪರೀಕ್ಷೆ, ಅರ್ಹತೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ :
ಆಯ್ಕೆಯಾದ 60 ವರ್ಷದೊಳಗಿನವರಿಗೆ 32,950 ರೂ. ಮತ್ತು 60 ವರ್ಷ ದಾಟಿದವರಿಗೆ 30,000 ರೂ. ಮಾಸಿಕ ವೇತನ ನೀಡಲಾಗುತ್ತದೆ.
ಇದನ್ನೂ ಓದಿ : News : ಶಿಕ್ಷಕರನ್ನೇ ಅಟ್ಟಾಡಿಸಿಕೊಂಡು ಥಳಿಸಿದ ವಿದ್ಯಾರ್ಥಿಗಳು.!
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
General Manager (HR), Bangalore Metro Rail Corporation Limited, III Floor, BMTC Complex, K.H Road, Shanthinagar, Bengaluru – 560027.
(ಗಮನಿಸಿ : ನಿಮ್ಮ ಅಪ್ಲಿಕೇಷನ್ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಬೇಕು. ಅರ್ಜಿ ಲಕೋಟೆಯ ಮೇಲ್ಭಾಗದಲ್ಲಿ “APPLICATION FOR THE POST OF ASSISTANT SECURITY OFFICER” ಎಂದು ನಮೂದಿಸುವುದನ್ನು ಮರೆಯಬೇಡಿ.)
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 9, 2024.
ಇದನ್ನೂ ಓದಿ : 10ನೇ ತರಗತಿ ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ Railway ಇಲಾಖೆಯಲ್ಲಿ ಉದ್ಯೋಗಾವಕಾಶ.!
ಪ್ರಮುಖ ಲಿಂಕ್‌ಗಳು :
- ನೋಟಿಪಿಕೇಶನ್ : BMRCL Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್ಸೈಟ್ ವಿಳಾಸ: english.bmrc.co.in ಗೆ ಭೇಟಿ ನೀಡಿ ಅಥವಾ
- ಇಮೇಲ್ ವಿಳಾಸ : helpdesk@bmrc.co.inಗೆ ಸಂಪರ್ಕಿಸಿ.
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official