ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪ್ರಣವ ಪಂಚಾಕ್ಷರಿ ಗುರುಪೀಠದ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯೂ ಪ್ರಣವ ಪಂಚಾಕ್ಷರಿ ಗುರುಪೀಠದ ಶಂಭು ಸೋಮನಾಥ ಶಿವಾಚಾರ್ಯ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಇದನ್ನು ಓದಿ : Health : ರಾತ್ರಿ ಮಲಗುವ ಮುಂಚೆ 1 ಲೋಟ ನೀರು ಕುಡಿದರೆ ಏನಾಗುವುದು ಗೊತ್ತೇ.?
ಅಲ್ಲದೇ ಸ್ವಾಮೀಜಿ ವಿರುದ್ಧ ದೂರು ನೀಡಲು ಸಂತ್ರಸ್ತೆ ಮಹಿಳೆ ಠಾಣೆಗಳಿಗೆ ಅಲೆದಾಟ ನಡೆಸಿದ್ದಾರೆ. ಬಳಿಕ ಠಾಣೆಯ ವಿಜಿಟರ್ ರಿಜಿಸ್ಟರ್ ಬುಕ್ ನಲ್ಲಿ ಹೆಸರು, ವಿಳಾಸ ಬರೆದು ಹೋಗಿದ್ದಾರೆ.
ಸದ್ಯ ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಮೂಲತಃ ಆಂಧ್ರಪ್ರದೇಶ ಮೂಲದವಳಾದ ಮಹಿಳೆ ಹಾಗೂ ಆಕೆಯ ಅಪ್ರಾಪ್ತೆ ಮಗಳು ಮಠಕ್ಕೆ ಕಳೆದ 6 ತಿಂಗಳ ಹಿಂದೆ ಬಂದಿದ್ದರು. ಸದ್ಯ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ
ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಸ್ಮಾರ್ಟ್‌ಫೋನ್ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿಯಲು ಈ Code ಬಳಸಿ.!
ಇನ್ನೂ ಈ ಕುರಿತು ಶಂಭು ಸೋಮನಾಥ ಶಿವಾಚಾರ್ಯ ಶ್ರೀಗಳು ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧದ ಆರೋಪ ಸುಳ್ಳು ಎಂದ ತಿಳಿಸಿದ್ದಾರೆ. ಸಂತ್ರಸ್ತೆಗೆ ಒತ್ತಡ ಹಾಕಿ 10 ಲಕ್ಷ ನೀಡಿ ಸೆಟ್ಲ್ಮೆಂಟ್ ಮಾಡಿರುವ ಆರೋಪವೂ ಸುಳ್ಳು. ಆ ಮಹಿಳೆಯನ್ನು ನಾವೇ ಕೆಲಸದಿಂದ ತೆಗೆದು ಕಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
ಈ ಬಗ್ಗೆ ಸಿಟ್ಟಾಗಿ ಪೊಲೀಸ್ ಠಾಣೆ ಹೋಗಿರುವ ವಿಚಾರ ಕೂಡ ಗೊತ್ತಾಯಿತು. ಕರೆದು ಬುದ್ದಿಮಾತು ಹೇಳಿ ಸಹ ಕಳುಹಿಸಿ ಕೊಟ್ಟಿದ್ದೀವಿ. ಅದನ್ನ ತಪ್ಪು ಕಲ್ಪನೆ ಮಾಡಿಕೊಂಡು ಅಪಪ್ರಚಾರ ಮಾಡುವುದು ಸೂಕ್ತವಲ್ಲವೆಂದು ಶ್ರೀಗಳು ಹೇಳಿದ್ದಾರೆ.