ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯುವತಿಯೊಬ್ಬಳಿಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಕೆಎಸ್‌ಆರ್‌ಪಿ ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಹೈದರಾಬಾದ್ ಮೂಲದ ಯುವತಿಯನ್ನು ಮದುವೆಯಾಗುವುದಾಗಿ ಕರೆಸಿಕೊಂಡು ಕಲಬುರಗಿ ನಗರದ ಖಾಸಗಿ ಲಾಡ್ಜ್‌ನಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಘಟನೆಯ ಹಿನ್ನೆಲೆ :
ಯುವತಿಯು ಹೈದರಾಬಾದ್‌ನಲ್ಲಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕಾನ್ಸ್ಟೇಬಲ್ ಯಲ್ಲಾಲಿಂಗಗೆ ಪರಿಚಯವಾಗಿದ್ದಾಳೆ. ಹಲವು ದಿನಗಳು ಇಬ್ಬರೂ ಫೋನ್‌ನಲ್ಲಿ ಮಾತನಾಡಿದ್ದರು. ಮದುವೆ ಆಗುವುದಾಗಿ ನಂಬಿಸಿದ ಯಲ್ಲಾಲಿಂಗ, ಆಗಸ್ಟ್ 13ರಂದು ಯುವತಿಯನ್ನು ಕಲಬುರಗಿಗೆ ಕರೆಯಿಸಿಕೊಂಡರು.
ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ಇರಿಸಿ, ಮದುವೆ ಆಗುವುದಾಗಿ ನಂಬಿಸಿ ಬಳಿಕ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಫೋನ್ ಕರೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಯುವತಿಯು ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ನಾನು ಪೊಲೀಸ್ ಇದ್ದೇನೆ, ಬೇರೆಯವರನ್ನು ಮದುವೆಯಾದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತದೆ. ನಿನ್ನಿಂದ ಹಣ ಸಿಗಲ್ಲ. ಮನೆಯವರೂ ಒಪ್ಪುತ್ತಿಲ್ಲ ಎಂದು ನಿರಾಕರಿಸಿದನು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಜೀವ ಬೆದರಿಕೆಯೂ ಹಾಕಿದ್ದಾನೆ.
ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!
ಇದರಿಂದ ನೊಂದ ಸಂತ್ರಸ್ತೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ಯಲ್ಲಾಲಿಂಗ ವಿರುದ್ಧ ಬಿಎನ್ಎಸ್ ಕಾಯ್ದೆ 64, 318 (B) 351, 352 ಅಡಿಯಲ್ಲಿ ಕೇಸ್ ದಾಖಲಾಗಿದೆ.