Saturday, July 13, 2024
spot_img
spot_img
spot_img
spot_img
spot_img
spot_img

ಯುವತಿ ರೀಲ್ಸ್ ಮಾಡುವಾಗಲೇ ಬಡಿದ ಸಿಡಿಲು ; ಬೆಚ್ಚಿಬೀಳಿಸುವ ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುವ ಜನತೆಗೆ ಕಂಡ ಕಂಡಲ್ಲೆಲ್ಲಾ ರೀಲ್ಸ್‌ ಮಾಡುವ ಹುಚ್ಚು. ಈ ಹುಚ್ಚು ಎಷ್ಟರಮಟ್ಟಿಗೆಂದರೆ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಇರುತ್ತದೆ. ಹಲವಾರು ಯುವಕ-ಯುವತಿಯರು ರೀಲ್ಸ್‌ ಮಾಡುವಾಗ ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ ಇಲ್ಲೊಬ್ಬಳು ಮಳೆಯಲ್ಲಿ ರೀಲ್ಸ್‌ ಮಾಡಲು ಹೋಗಿ ಸಿಡಿಲು ಬಡಿತದ ಆಘಾತದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾಳೆ. ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : RDPR : ಗ್ರಾಮ ಪಂಚಾಯತಿಗಳಲ್ಲಿ ಭರ್ಜರಿ ನೇಮಕಾತಿಗೆ ಸರ್ಕಾರ ಆದೇಶ.!

ಬಿಹಾರದ ಸೀತಾಮರ್ಹಿಯಲ್ಲಿ ಯುವತಿಯೋರ್ವಳು ಮಳೆ ಬರುವ ವೇಳೆ ತನ್ನ ಮನೆಯ ಟೆರೇಸ್‌ನಲ್ಲಿ ನಿಂತು ಡ್ಯಾನ್ಸ್ ಮಾಡುವ ರೀಲ್ಸ್ ಮಾಡಲು ಹೋಗಿದ್ದಾಳೆ.

ಅದಕ್ಕೆಂದು ಮೊಬೈಲ್ ಸೆಟ್ ಮಾಡಿ ಇನ್ನೇನು ಡ್ಯಾನ್ಸ್ ಮಾಡಬೇಕು ಎನ್ನುವಷ್ಟರಲ್ಲಿ ಮನೆಯ ಪಕ್ಕದಲ್ಲೇ ಸಿಡಿಲು ಬಡಿದಿದೆ. ಇದರಿಂದ ಗಾಬರಿಯಾದ ಯುವತಿ ಮೊಬೈಲ್ ಅಲ್ಲೇ ಬಿಟ್ಟು ಮನೆಯೊಳಗೆ ಓಡಿ ಹೋಗಿದ್ದಾಳೆ.

ಇದನ್ನು ಓದಿ : ಬೆಳಗ್ಗೆ ಎದ್ದಾಕ್ಷಣ ತುಂಬಾ ಬಾಯಾರಿಕೆ ಆಗುತ್ತಿದೆಯೇ.? ಇದು ಈ ರೋಗದ ಲಕ್ಷಣವಾಗಿರಬಹುದು.!

ಅದೃಷ್ಟವಶಾತ್ ಆಕೆಯ ಅದೃಷ್ಟ ಚೆನ್ನಾಗಿತ್ತು ಹಾಗಾಗಿ ಸಂಭವನೀಯ ಅನಾಹುತ ತಪ್ಪಿತು, ಸಿಡಿಲು ಬಡಿದ ವಿಡಿಯೋ ಯುವತಿ ಸೆಟ್ ಮಾಡಿ ಇಟ್ಟಿದ್ದ ಮೊಬೈಲ್ ನಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಜೋರು ಮಳೆ ಬರುವಾಗ ಗುಡುಗು ಮಿಂಚು ಬರುತ್ತೆ ಎಂಬುದನ್ನೂ ಮರೆತು ಯುವತಿ ಮನೆಯ ಮೇಲೆ ರೀಲ್ಸ್‌ ಮಾಡಲು ಹೋಗಿರುವುದನ್ನು ನೋಡಬಹುದು. ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಿಲು ಬಡಿಯುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

spot_img
spot_img
- Advertisment -spot_img