ಜನಸ್ಪಂದನ ನ್ಯೂಸ್, ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಸೇಟ್ ದಿನ್ನೇ ಸಮೀಪ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ, ಟಾಟಾ ಸುಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಡೆದಿದೆ.
ಇದನ್ನು ಓದಿ : 24 ವರ್ಷದ ಯುವಕನೊಂದಿಗೆ ರೂಮ್ಗೆ ಹೋದ 35ರ Aunty ; ಮುಂದಾಗಿದ್ದು.?
ಸಾವಿಗೀಡಾದವರು ರಾಜಿಯಾ ಶಾಹಿನ್ (50) ಮೆಹಿಮುದಲ್ (45) ಹಾಗೂ ಮೊಲಾನಾ ಶಾಹಿನ್ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನೂ ಇವರು ಬಿಹಾರ ಮೂಲದವರಾಗಿದ್ದು, ಕೋಲಾರದಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಕಾರಿನ ಇಂಜಿನ್ ಲೈಫ್ ದ್ವಿಗುಣವಾಗಬೇಕೆ.? ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಹೀಗೆ ಮಾಡಿ.!
ಟಾಟಾ ಸುಮೋದಲ್ಲಿ ಕೋಲಾರದಿಂದ ಆಂಧ್ರದ ಪೆನುಗೊಂಡ ದರ್ಗಾಗೆ ಹೋಗುವಾಗ ಈ ಅಪಘಾತ ನಡೆದಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.