ಜನಸ್ಪಂದನ ನ್ಯೂಸ್, ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಸಮೀಪ ವೇಗವಾಗಿ ಬಂದ ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಇದನ್ನು ಓದಿ : ರಾಜ್ಯದ ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ; ಶ್ರೀಗಳಿಂದ ಸ್ಪಷ್ಟೀಕರಣ.!
ಸಾವನ್ನಪ್ಪಿದವರು ಗುತ್ತಿಗೆದಾರ ಲಕ್ಷ್ಮಣ ವಡ್ಡರ, ಬೈಲಪ್ಪ ಬಿರಾದಾರ, ಕಾರು ಚಾಲಕ ಮಹ್ಮದರಫೀಕ ಗುಡ್ನಾಳ, ರಾಮಣ್ಣ ನಾಯಕ ಎಂದು ತಿಳಿದು ಬಂದಿದೆ.
ಇವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದವರಾಗಿದ್ದು, ಮೃತ ಲಕ್ಷ್ಮಣ ವಡ್ಡರ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ನಜ್ಜುಗುಜ್ಜಾಗಿದೆ.
ಇದನ್ನು ಓದಿ : Health : ರಾತ್ರಿ ಮಲಗುವ ಮುಂಚೆ 1 ಲೋಟ ನೀರು ಕುಡಿದರೆ ಏನಾಗುವುದು ಗೊತ್ತೇ.?
ಹೊಸಪೇಟೆ ಬಳಿಯ ಹುಲಿಗೆಮ್ಮನ ದೇವಸ್ಥಾನದ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ.
ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.