ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ (Adabagatti of Alnavar Taluk) ಬಳಿ ಟೆಂಪೊ (ಟಿಟಿ) ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಸವದತ್ತಿ ತಾಲ್ಲೂಕಿನ ಶಿರಸಂಗಿಯ ಗ್ರಾಮದ ಮಹಾದೇವಪ್ಪ ಹುಲ್ಲಳ್ಳಿ (39), ಹನುಮಂತ ಮಲ್ಲಾಡ್ (36) ಹಾಗೂ ಮಹಾಂತೇಶ ಚವಾಣ (37) ಸಾವಿಗೀಡಾಗಿದ್ದು, ಇವರು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : IPhone ಎಗರಿಸಿದ ಮಂಗ ; ಫೋನ್‌ಗಾಗಿ ಯುವತಿ ಮಾಡಿದ್ದೇನು? ವಿಡಿಯೋ ನೋಡಿ.!
ಗೋವಾದಿಂದ ಚಿತ್ರದುರ್ಗಕ್ಕೆ (Goa to Chitradurg) ಸಂಚರಿಸುತ್ತಿದ್ದ ಟೆಂಪೊ ಹಾಗೂ ಶಿರಸಂಗಿಯಿಂದ ಗೋವಾ ಕಡೆಗೆ (Shirasangi to Goa) ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿವೆ.
ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಹಿಂದಿನ ಸುದ್ದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಜನಸ್ಪಂದನ ನ್ಯೂಸ್, ಡೆಸ್ಕ್ : ಆದಾಯ ಮೀರಿದ ಆಸ್ತಿ ಸಂಪಾದನೆಯ ಆರೋಪದ ಮೇಲೆ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೆಬಲ್‌ವೊಬ್ಬರ (Former Constable of Transport Department) ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ (large amount of property was discovered) ಮಾಡಿದ್ದಾರೆ.
ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!
ಮಧ್ಯಪ್ರದೇಶದ ಭೋಪಾಲ್‌ನಲ್ಲಿ (Bhopal, Madhya Pradesh) ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋಗಳು ವೈರಲ್ ಆಗುತ್ತಿವೆ.
ದಾಳಿ ನಡೆಸಿದ ವೇಳೆ ₹200 ಮುಖ ಬೆಲೆಯ ನೋಟುಗಳ ಬಂಡಲ್ ಹಾಗೂ 40 ಕೆ.ಜಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.
ಇದನ್ನು ಓದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಲೋಕಾಯುಕ್ತ ಪೊಲೀಸರು ₹2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ (The property has been confiscated) ಎಂದು ವರದಿಯಿಂದ ತಿಳಿದು ಬಂದಿದೆ.
ನಗದು ಜತೆಗೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ (seize). ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ.