ಜನಸ್ಪಂದನ ನ್ಯೂಸ್, ಡೆಸ್ಕ್ : ಘೇಂಡಾಮೃಗವು ಬೈಕ್ ಸವಾರನನ್ನು ಬೆನ್ನಟ್ಟಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸಾವಿಗೀಡಾದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ ಬಳಿ ನಡೆದಿದೆ.
ಮೃತರು 37 ವರ್ಷದ ಸದ್ದಾಂ ಹುಸೇನ್ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ ತಾತಪ್ಪ; Video ನೋಡಿದ್ರೆ ಬೆರಗಾಗ್ತೀರಾ.!
ವ್ಯಕ್ತಿಯೂ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದು ಬೈಕ್ ಸವಾರನ ಬಳಿಗೆ ಬಂದಿದೆ.
ಘೇಂಡಾಮೃಗ ಹಿಂಬಾಲಿಸುತ್ತಿದ್ದಂತೆ ಆತ ಬೈಕ್ನಿಂದ ಇಳಿದು ಮೈದಾನಕ್ಕೆ ಓಡಿದ್ದಾನೆ. ಸದ್ಯ ಘೇಂಡಾಮೃಗ ಅವನನ್ನು ಹಿಂಬಾಲಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನೂ ಅಲ್ಲೇ ಸಮೀಪದಲ್ಲಿರುವ ಜನರು ಘೇಂಡಾಮೃಗವನ್ನು ಹೆದರಿಸಲು ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲೇ ಸ್ಥಳದಲ್ಲಿದ್ದ ವ್ಯಕ್ತಿ ತನ್ನ ಮೊಬೈಲ್ನಲ್ಲಿ ದೃಶ್ಯವನ್ನು ಸೆರೆಹಿಡಿಯುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : Health : ಡೊಳ್ಳು ಹೊಟ್ಟೆಯನ್ನು 1 ತಿಂಗಳಿನಲ್ಲಿ ಚಪ್ಪಟೆಯಾಗಿ ಮಾಡುತ್ತದೆ ಈ ಪದಾರ್ಥ.!
ಹುಸೇನ್ ತಲೆ ಒಡೆದ ಸ್ಥಿತಿಯಲ್ಲಿ ಹೊಲದಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಘೇಂಡಾಮೃಗದ ಸುಮಾರು 2,800 ಕೆ.ಜಿ. ತೂಕವಿರುತ್ತದೆ. ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
#BreakingNews
One reportedly killed by a rhino in #PobitoraWildlifeSanctuary today. Man-aninal conflict has shot up in #Assam due to rapid deforestation @himantabiswa @guwahaticity @DEFCCOfficial pic.twitter.com/YCysDfnfPo— Pranjal Baruah (@Pranjal_khabri) September 29, 2024