ಜನಸ್ಪಂದನ ನ್ಯೂಸ್, ಡೆಸ್ಕ್ : ಮಾನವ ಯಾವಾಗ ಹುಟ್ಟಬಹುದು ಎಂಬುದನ್ನು ಹೇಳಬಹುದು, ಆದರೆ ಮನುಷ್ಯ ಯಾವಾಗ ಸಾಯುತ್ತಾನೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ.
ಹೌದು ಈ ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಸಾವು ಯಾವಾಗ ಬೇಕಾದರೂ ನಮ್ಮನ್ನು ಕರೆಯಬಹುದು.
HPCL : ಹಿಂದುಸ್ತಾನ್ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇತ್ತೀಚಿಗಂತೂ ಹೃದಯಾಘಾತದ ಪ್ರಕರಣಗಳು ತೀರಾ ಹೆಚ್ಚಿದ್ದು, ಮಕ್ಕಳು, ಯುವಕರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಇದೀಗ ಅಂತಹದ್ದೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಕುಟುಂಬ ಸದಸ್ಯರೊಂದಿಗೆ ಹೋಟೆಲ್’ಗೆ ಬಂದು, ಖುಷಿ ಖುಷಿಯಲ್ಲಿ ಮಾತನಾಡುತ್ತ ಇನ್ನೇನು ಊಟ ಮಾಡಬೇಕು ಅಂತ ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಪ್ರಾಣವನ್ನೇ ಬಿಟ್ಟಿದ್ದಾರೆ.
ಮಲಗಿದ್ದ ಮಗುವಿನ ತೊಟ್ಟಿಲ ಮೇಲೆ ಹತ್ತಿದ ನಾಗರಹಾವು ; ಆಘಾತಕಾರಿ Video ಇಲ್ಲಿದೆ ನೋಡಿ.!
ಈ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೆಸ್ಟೋರೆಂಟ್ ಒಂದಕ್ಕೆ ಕುಟುಂಬ ಸಮೇತ ಊಟಕ್ಕೆ ಬಂದಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಈ ದೃಶ್ಯ ಅಲ್ಲಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಹನ ಸವಾರರಿಗೆ big ಶಾಕ್ : ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ.!
ಪ್ರಿಯಾ ಸಿಂಗ್ (@priyarajputlive) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕುಟುಂಬ ಸಮೇತ ರೆಸ್ಟೋರೆಂಟ್ ಗೆ ಬಂದಂತಹ ವ್ಯಕ್ತಿಯೊಬ್ಬರು ಅವರೆಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಹೀಗೆ ಮಾತನಾಡುತ್ತಿರುವಾಗ ಅವರು ಆರ್ಡರ್ ಮಾಡಿದಂತಹ ಫುಡ್ ಬರುತ್ತದೆ. ಇನ್ನೇನೂ ತುತ್ತು ಅನ್ನವನ್ನು ಬಾಯಲ್ಲಿಡಬೇಕು ಅನ್ನುವಷ್ಟರಲ್ಲಿ ಆ ಮಧ್ಯವಯಸ್ಸಿನ ವ್ಯಕ್ತಿ ಹೃದಯಾಘಾತಕ್ಕೆ ತುತ್ತಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.
हार्ट अटैक से लोग लगातार मर रहे हैं लेकिन सरकार को इससे कोई फ़र्क़ नहीं पड़ता दिख रहा.
ये परिवार रेस्टोरेंट में खाना खाने गया था. पिता की हार्ट अटैक आया और मौत हो गई. pic.twitter.com/MlP6oEt5dv
— Priya singh (@priyarajputlive) June 12, 2024