ಜನಸ್ಪಂದನ ನ್ಯೂಸ್, ಡೆಸ್ಕ್ : ಪತ್ನಿಯೋರ್ವಳು ಬೇರೆ ಮಹಿಳೆಯ ಜೊತೆ ಎಂಜಾಯ್ ಮಾಡುತ್ತಿದ್ದ ಪತಿಯನ್ನು ನಡುರಸ್ತೆಯಲ್ಲಿಯೇ ರೆಡ್ ಹ್ಯಾಂಡಾಗಿ ತಡೆ ಹಿಡಿದ ಘಟನೆಯೊಂದು ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.
ತನ್ನ ಪತಿ ಇನ್ನೊಬ್ಬ ಮಹಿಳೆಯನ್ನು ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿಸಿಕೊಂಡು ಹೋಗುತ್ತಿರುವುದನ್ನು ನೋಡಿದ ಪತ್ನಿ ಕೋಪಗೊಂಡು ಅವರಿಬ್ಬರನ್ನು ನಡುರಸ್ತೆಯಲ್ಲಿಯೇ ಹಿಡಿದಿದ್ದಾಳೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಸದ್ಯ ಇದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೀಗಾಗಿಯೇ ರಸ್ತೆಯಲ್ಲಿಣ ಭಾರೀ ಗದ್ದಲ ಉಂಟಾಗಿದೆ.
ಪತ್ನಿಯು ಕುಟುಂಬ ಸಮೇತರಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸ್ಕೂಟರ್‌ನಲ್ಲಿ ಎದುರುಗಡೆಯಿಂದ ಬರುತ್ತಿರುವುದನ್ನು ಗಮನಿಸಿದ್ದಾಳೆ.
ಇದನ್ನು ಓದಿ : ಅಕ್ರಮ ಮರಳುಗಾರರ ಪರ ಮಾತನಾಡಿದ ಶಾಸಕರಿಗೆ ಖಡಕ್ ಉತ್ತರ ಕೊಟ್ಟ ಲೇಡಿ ಆಫೀಸರ್.!
ಇದನ್ನು ಗಮನಿಸಿದ ಕೂಡಲೇ ಕಾರಿನಿಂದಿಳಿದ ಪತ್ನಿ, ಸ್ಕೂಟರ್ ನಿಲ್ಲಿಸಲು ಅದನ್ನು ತಳ್ಳಿ ಬೀಳುವಂತೆ ಮಾಡಿದ್ದಾಳೆ. ಈ ವೇಳೆ ಮಹಿಳೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವುದನ್ನು ಬಿಚ್ಚಿಸಿ ವಿಡಿಯೋ ಮಾಡಲು ಆರಂಭಿಸಿದ್ದಾರೆ.
ಈ ಮಧ್ಯೆ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರುವ ಪತ್ನಿ, ನೀವು ಯಾರು ಮತ್ತು ನೀವು ಏನು ಮಾಡುತ್ತಿದ್ದೀರಿ, ನಿಮ್ಮ ಹೆಸರು ಹೇಳು ಎನ್ನುವುದನ್ನು ವಿಡಿಯೀದಲ್ಲಿ ನೋಡಬಹುದಾಗಿದೆ. ಇದೇ ವೇಳೆ ಪತ್ನಿಯ ಕುಟುಂಬಸ್ಥರು ಕೂಡ ಮಹಿಳೆಯನ್ನು ನಿಂದಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!
ಈ ವೇಳೆ ಪತಿ ಅವಳ ಹೆಸರು ನೀಲಂ ಮತ್ತು ಅವಳು ನನ್ನೊಂದಿಗೆ ವಾಸಿಸುತ್ತಾಳೆ. ಇದೀಗ ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೆ. ನೀನು ನನ್ನನ್ನು ಬಿಟ್ಟು ಹೋಗಿರುವುದರಿಂದ ಇನ್ನು ಮುಂದೆ ನೀನು ನನ್ನ ಬಗ್ಗೆ ಚಿಂತಿಸಬಾರದು ಎಂದಿದ್ದಾರೆ. ಇದಾದ ನಂತರ ಪತಿ ಸ್ಕೂಟರ್ ನಲ್ಲಿ ಆ ಮಹಿಳೆಯ ಜೊತೆ ಅಲ್ಲಿಂದ ತೆರಳುತ್ತಾನೆ.
ಪತಿ ಪತ್ನಿಯ ಇಬ್ಬರ ನಡುವೆ 4 ವರ್ಷಗಳಿಂದ ವಿಚ್ಛೇದನ ಪ್ರಕರಣ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
— Anurag (@Anurag1978042) October 2, 2024