ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇವುಗಳ ಸಾಲಿಗೆ ಇನ್ನೊಂದು ವಿಡಿಯೋ ಸೇರ್ಪಡೆಯಾಗುತ್ತಿದೆ.
ಅದೇನೆಂದರೆ, ಕಟ್ಟಿದ್ದ ಎಮ್ಮೆಯ ಬಳಿಗೆ ನಾಗರ ಹಾವೊಂದು ಹರಿದಾಡುತ್ತ ಹೋಗಿರುವ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ.!
ವೈರಲ್ ಆಗಿರೋ ವಿಡಿಯೋದಲ್ಲಿ ಹಾವು ಮತ್ತು ಎಮ್ಮೆ ಮುಖಾಮುಖಿಯಾಗುತ್ತವೆ. ವಿಡಿಯೋದಲ್ಲಿ ಎಮ್ಮೆ ಎದುರು ಹಾವು ಬರುತ್ತದೆ. ಬಂದ ಮರು ಕ್ಷಣವೇ ಹಾವು ಎಮ್ಮೆಯ ಮುಖಕ್ಕೆ ಕಚ್ಚುತ್ತದೆ. ಆದರೆ, ಎಮ್ಮೆ ಮಾತ್ರ ಮತ್ತೇ ಪ್ರೀತಿಯಿಂದ ಹಾವಿನ ಬಳಿಗೆ ಬಂದು ಮುದ್ದಿಸಿದ್ದು ಅಚ್ಚರಿ ಮೂಡಿಸಿದೆ.
ಈ ವೀಡಿಯೊವನ್ನು Instagram ನಲ್ಲಿ @itz__akhil__5k ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ : Health : ಅಮೃತಬಳ್ಳಿಯಿಂದಾಗುವ ಆರೋಗ್ಯ ಪ್ರಯೋಜನಗಳು.!
ಕೆಳಗಿನ ವಿಡಿಯೋದಲ್ಲಿ ಎಮ್ಮೆ ಹಾವನ್ನು ನೆಕ್ಕುವುದನ್ನು ನೀವು ನೋಡಬಹುದು. ಎಮ್ಮೆ ಈ ರೀತಿ ಮಾಡುವುದನ್ನು ನೋಡಿ ಹಾವು ಕೂಡ ಶಾಂತವಾಯಿತು.
ಇದೇ ವೇಳೆ ಆ ಎಮ್ಮೆಯ ಪಕ್ಕದಲ್ಲಿರುವ ಮತ್ತೊಂದು ಎಮ್ಮೆಯು ಸಹ ಹಾವನ್ನು ಮುದ್ದಿಸುವ ತವಕದಲ್ಲಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಶಾಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾವನ್ನು ಅಲ್ಲಿಂದ ತೆಗೆಯುವ ಪ್ರಯತ್ನ ಮಾಡದೆ, ವಿಡಿಯೋ ತೆಗೆಯುತ್ತಿದ್ದಾರೆಂದು ದೂರುತ್ತಿದ್ದಾರೆ.
ಇದನ್ನು ಓದಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!
ಇನ್ನು ಕೆಲವರು ಎಮ್ಮೆಯ ಯೋಗಕ್ಷೇಮದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಈ ವೀಡಿಯೋಗೆ ಇದುವರೆಗೆ 30 ಮಿಲಿಯನ್ ವೀಕ್ಷಣೆಗಳು ಮತ್ತು 5 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
View this post on Instagram