ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಹೆಣ್ಣು ಮಕ್ಕಳು ತನಗಿಂತ 5-6 ವರ್ಷ ದೊಡ್ಡವವನ್ನು ಮದುವೆಯಾಗುತ್ತಾರೆ. ಆದ್ರೆ ಈಗ 20, 25 ವರ್ಷ ವರ್ಷ ಯುವತಿಯರು ತಮ್ಮ ತಾತನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವ ಟ್ರೆಂಡ್ ಶುರುವಾಗಿದೆ.
ಇಂತಹ ಸಾಕಷ್ಟು ಘಟನೆಗಳ ಸುದ್ದಿಗಳು ಈ ಹಿಂದೆ ನಡೆದಿವೆ. ಇದೀಗ ಅದರ ಸಾಲಿಗೆ ಮತ್ತೊಂದು ಮದುವೆ ಸೇರ್ಪಡೆಯಾಗಿದೆ. 20 ರ ತರುಣಿಯೊಬ್ಬರು 70 ವರ್ಷದ ಹಣ್ಣು ಮುದುಕನನ್ನು ಮದುವೆಯಾದ ಘಟನೆ ನಡೆದಿದೆ.
ಇದನ್ನು ಓದಿ : Video : ಬೃಹದಾಕಾರದ ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡೆಯಾಟ ಆಡಿದ ಪುಟ್ಟ ಮಕ್ಕಳು.!
ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿದ ಯುವಕರು ನಾವುಗಳು ಮಠ ಸೇರೊದೇ ಬೆಸ್ಟು ಎಂದು ಬೇಸರ ಹೊರಹಾಕಿದ್ದಾರೆ.
20 ರ ಹರೆಯದ ಚೆಂದುಳ್ಳಿ ಚೆಲುವೆಯೊಬ್ಬಳು 70 ರ ಹರೆಯದ ಮುದುಕನನ್ನು ಮದುವೆಯಾಗುವ ದೃಶ್ಯ ವಿಡಿಯೋದಲ್ಲಿ ನೋಡಬಹುದು.
ಕುಟುಂಬಸ್ಥರ ಸಮ್ಮಖದಲ್ಲಿ ನಡೆದ ಈ ಮದುವೆಯಲ್ಲಿ ಮುದುಕ ಯುವತಿಯ ಕುತ್ತಿಗೆಗೆ ಹೂವಿನ ಹಾರ ಹಾಕುತ್ತಿದ್ದಂತೆ ಬಹಳ ಖುಷಿ ಖುಷಿಯಿಂದ ಯುವತಿಯು ಕೂಡ ಮುದುಕನಿಗೆ ಹಾರ ಹಾಕಿದ್ದಾಳೆ.
ಈ ವಿಡಿಯೋವನ್ನು Gulzar_sahab ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸೆಪ್ಟೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನು ಓದಿ : ಸ್ಮಾರ್ಟ್‌ಫೋನ್ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿಯಲು ಈ Code ಬಳಸಿ.!
ಕೆಲವರು ಇದು ಕಲಿಯುಗ, ಇಲ್ಲಿ ಏನೂ ಬೇಕಾದ್ರೂ ಆಗ್ಬೋದು ಎಂದು ಕಮೆಂಟ್ ಮಾಡಿದರೆ, ಇದನ್ನೆಲ್ಲಾ ನೋಡಿ ಸಿಂಗಲ್ ಆಗಿರುವ ನನ್ನ ದುಃಖ ಇನ್ನೂ ಜಾಸ್ತಿಯಾಗ್ತಿದೆ ಅಂತಾರೆ ಕೆಲವರು.
यह सब क्या देखना पड़ रहा है ☹️ pic.twitter.com/1woN1IIGv5
— ज़िन्दगी गुलज़ार है ! (@Gulzar_sahab) September 26, 2024