ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ 16 ವರ್ಷದ ಬಾಲಕನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಲ್ಲಮ್ಮ ಶೇಖಣ್ಣಿ ಎಂಬ ಮಹಿಳೆ ಮಲ್ಲಿಕಾರ್ಜುನ ಹಿರೇಮಠ ಎಂಬಾತ ಬಾಲಕನನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಮುಂದೆ ಸಾಗುವಂತೆ ಹಾರ್ನ್ ಮಾಡಿದ ಚಾಲಕ ; ಬಂದು ಕಪಾಳಮೋಕ್ಷ ಮಾಡಿದ ಕಾನ್ಸ್‌ಟೇಬಲ್ ; ವಿಡಿಯೋ Viral.!
4 ವರ್ಷದ ಮಗುವಿನೊಂದಿಗೆ ಅಪ್ರಾಪ್ತ ಬಾಲಕನೊಂದಿಗೆ ವಿವಾಹಿತ ಮಹಿಳೆ ಎಸ್ಕೇಪ್ ಆಗಿದ್ದಾಳೆ ಎನ್ನಲಾಗಿದೆ.
ವಿವಾಹಿತ ಮಹಿಳೆ ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ತಾಯಿ ಅಕ್ಕಮಹಾದೇವಿ ಆರೋಪಿಸಿದ್ದಾರೆ.
ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಲವ್ ಆಗಿದ್ದು, ಮಲ್ಲಿಕಾರ್ಜುನನನ್ನು ಪುಸಲಾಯಿಸಿಕೊಂಡು ಪರಾರಿಯಾಗಿದ್ದಾಳೆ ಅಂತ ಬಾಲಕನ ತಾಯಿ ಆರೋಪ ಮಾಡಿದ್ದಾರೆ.
ಇದನ್ನು ಓದಿ : ನಡು ರಸ್ತೆಯಲ್ಲೇ ಯುವಕರಿಬ್ಬರ ಅಪಾಯಕಾರಿ ಬೈಕ್ ಸ್ಟಂಟ್ : ಹೆಲ್ಮೆಂಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿ ಬುದ್ದಿ ಹೇಳಿದ ಅಂಕಲ್ ವಿಡಿಯೋ ವೈರಲ್.!
ಈ ಹಿಂದೆ ಆ ಮಹಿಳೆಗಾಗಿ ಮಲ್ಲಿಕಾರ್ಜುನ ವಿಷ ಸೇವಿಸಿದ್ದನು.
ಮೇ 13ರಂದು ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲು ಮಾಡಲಾಗಿದ್ದು, ಈವರೆಗೂ ಪೊಲೀಸರು ಬಾಲಕನನ್ನು ಹುಡುಕಿ ಕೊಟ್ಟಿಲ್ಲ ಎಂದು ಪೊಲೀಸರ ವಿರುದ್ಧ ಬಾಲಕನ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.