ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಮದುವೆ ಮಂಟಪಗಳಲ್ಲಿ ಮೊದಲ ಬಾರಿಗೆ ಹಣ್ಣು ಮುದುಕನಾಗಿರುವ ವರನನ್ನು ಕಂಡು ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ಸುದ್ದಿಗಳು ಕೂಡಾ ವೈರಲ್ ಆಗುತ್ತಿರುತ್ತವೆ. ಸದ್ಯ ಇಂತ ಮದುವೆ ಬಗ್ಗೆ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು.!
ವಿಡಿಯೋದಲ್ಲಿ ವರ ಅಜ್ಜನಾಗಿ ವಧು ಹುಡುಗಿಯಾಗಿದ್ದಾರೆ. ಈ ವೇಳೆ ಖಂಡಿತವಾಗಿಯೂ ಆ ಹುಡುಗಿಗೆ ನಿಂತ ನೆಲ ಕುಸಿದಂಗೆ ಆಗುತ್ತೆ.
69 ರ ಹಣ್ಣು ಮುದುಕನೊಂದಿಗೆ 20 ರ ಯುವತಿಯ ಮದುವೆ ನೆರವೇರಿದ್ದು, ವರನ ಮುಖ ನೋಡಿದ ಕೂಡಲೇ ವಧು ಮೂರ್ಛೆ ಹೋಗಿದ್ದಾಳೆ.
ಈ ಕುರಿತ ಪೋಸ್ಟ್ ಒಂದನ್ನು Incognito_qfs ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 20 ವರ್ಷದ ಮುಸ್ಲಿಂ ವಧು 69 ವರ್ಷದ ವರನ ಮುಖವನ್ನು ನೋಡಿ ಮೂರ್ಛೆ ಹೋದಳು ಎಂಬ ಶೀರ್ಷಿಕೆ ನೀಡಲಾಗಿದೆ.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಮನೆಯವರೆಲ್ಲರೂ ಯುವತಿಗೆ ವರನ ಮುಖವನ್ನು ತೋರಿಸದೆ ಸಿಂಪಲ್ ಆಗಿ ಮದುವೆ ನೆರವೇರಿಸಿದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ಹೀಗೆ ಮದುವೆಯಾದ ನಂತರ ವರನ ಮುಖ ತೋರಿಸುತ್ತಿದ್ದಂತೆ, ವಧು ಮೊದಲ ಬಾರಿಗೆ ತನ್ನ ಪತಿರಾಯನ ಮುಖ ನೋಡಿ ಮೂರ್ಛೆ ಹೋಗಿದ್ದಾಳೆ.
ಆಗಸ್ಟ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನು ಓದಿ : ನಿಮ್ಮ ಹೃದಯ ರೇಖೆಯಿಂದ ತಿಳಿಯಬಹುದು ನಿಮ್ಮ personality ; ನಿಮ್ಮ ಅಂಗೈ ರೇಖೆ ಯಾವ ರೀತಿ ಇದೆ.!
ಕೆಲವರು ಮೊದಲೇ ಹುಡುಗನ ಮುಖವನ್ನು ನೋಡದೆ ಅವಳೇಕೆ ಮದುವೆಗೆ ಒಪ್ಪಿದಳು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೂ ಕೆಲವರು ಹಿಂಗೂ ಉಂಟಾ ಎಂಬ ತಮಾಷೆಯ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಯ್ಯೋ ದೇವ್ರೇ ಇದೇನಿದು ಎಂದು ಫುಲ್ ಶಾಕ್ ಆಗಿದ್ದಾರೆ.
ಮದುವೆಯಾಗುವ ಹುಡುಗ ಹುಡುಗಿಯ ನಡುವೆ 10-12 ವರ್ಷದ ಅಂತರವಿರುವುದು ಸಾಮಾನ್ಯ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಹುಡುಗಿಯರು ಆ ಮದುವೆಗೆ ಒಲ್ಲೆ ಎನ್ನುತ್ತಾರೆ. ಆದ್ರೆ ಕೆಲವು ಹುಡುಗಿಯರು ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು, ಮನಸ್ಸಿಲ್ಲದಿದ್ದರೂ ತನಗಿಂತ 30-40 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗುತ್ತಾರೆ.
20 year old Muslim bride faints after her seeing face of her 69 year old husband. pic.twitter.com/KwDpGsWFsM
— Incognito (@Incognito_qfs) August 6, 2024