ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಗರ ಸಭೆ ಆಯುಕ್ತ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ.
ಇದನ್ನು ಓದಿ : Video : ಕಾಲೇಜು ಮುಂದೆ ನಿಂತಿದ್ದ ಯುವತಿಯರಿಗೆ ಗುಪ್ತಾಂಗ ತೋರಿಸಿ ಪರಾರಿಯಾದ ಕಾಮುಕ ಪೊಲೀಸ್ ವಶಕ್ಕೆ.!
ಹರಿಹರ ನಗರಸಭೆ ಆಯುಕ್ತ ಬಸವರಾಜ್ ಐಗುರು ಎನ್ನುವವ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ
ಸಾಮಗ್ರಿ ಸರಬರಾಜು ಮಾಡುವ ಗುತ್ತಿಗೆದಾರನಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ತಗ್ಲಾಕೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಹರಿಹರದ ವಿದ್ಯಾನಗರದಲ್ಲಿರುವ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಾಮಗ್ರಿ ಸರಬರಾಜು ಮಾಡುತ್ತಿದ್ದ ಕರಿಬಸಪ್ಪ ಎಂಬುವವರಿಂದ ಎರಡು ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಇದನ್ನು ಓದಿ : ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಜುಲೈ 09 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ.!
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕಮಲಾಪುರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ಹರಿಹರ ನಗರಸಭೆಯಲ್ಲಿ ಗುತ್ತಿಗೆದಾರನಿಂದ ಬಿಲ್ ಪಾಸ್ ಮಾಡಲು ಶೇ.10ರಷ್ಟು ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಹಾಗೂ ನಗರಸಭೆ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಕೇವಲ ವರ್ಷದ ಅಂತರದಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ.